ನಾನು ಇತ್ತೀಚೆಗೆ 'ದಿ ಲಾಸ್ಟ್ ಲೆಕ್ಚರ್' ಎಂಬ ಪುಸ್ತಕವನ್ನು ಓದಿದೆ. ವಿಜ್ಞಾನಿರ್ಯಾಂಡಿಪಾಶ್ ಬರೆದಿರುವ ಪುಸ್ತಕವಿದು. ಎಸ್. ಉಮೇಶ್ ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಿದ್ದಾರೆ. ಎರಡನೆಯ ಆವೃತ್ತಿಯ ಪ್ರತಿಯೊಂದಿಗೆ ಉಚಿತ ಆಡಿಯೋ ( ಚಿತ್ರನಟರಮೇಶ್ ಅರವಿಂದ್ ಧ್ವನಿಯಲ್ಲಿ) ಲಭ್ಯವಿದೆ. ಬೆಲೆ ರೂ.೧೪೦. ಸ್ಫೂರ್ತಿದಾಯಕವಾದ ಪುಸ್ತಕ. ನೀವೂ ಓದಿ.