WELCOME

ಈ ಬ್ಲಾಗಿನಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದ ನನ್ನ ಬರೆಹಗಳ ಜೆಪಿಜಿ ಪ್ರತಿಗಳನ್ನು ಹಂಚಿಕೊಳ್ಳತ್ತೇನೆ.














ಹುಡುಕಿ

Sunday, December 30, 2012

ನಾನು ಓದಿದ ಪುಸ್ತಕ

ನಾನು ಇತ್ತೀಚೆಗೆ ರಘುನಾಥ ಚ ಹ ಅವರ 'ಬಿಲ್ ಗೇಟ್ಸ್' ಪುಸ್ತಕ ಓದಿದೆ. ಬಿಲ್ ಗೇಟ್ಸ್ ಅವರ ಸಾಧನೆಯನ್ನೂ, ಅವರ ಮಾನವೀಯ ಮುಖವನ್ನೂ ಮುಖ್ಯವಾಗಿ ಚಿತ್ರಿಸಲಾಗಿದೆ. ಇದು ಬೆಂಗಳೂರಿನ ವಸಂತ ಪ್ರಕಾಶನದವರ 'ವಿಖ್ಯಾತರ ವ್ಯಕ್ತಿಚಿತ್ರ ಮಾಲೆ'ಯಲ್ಲಿ ಪ್ರಕಟಗೊಂಡಿದೆ.ಪುಟಗಳು: 82. ಬೆಲೆ: ರೂ. 30.

Friday, December 28, 2012

ಸಾಹಿತಿ ಶಿಕ್ಷಕರಿವರು

ಪ್ರಾಥಮಿಕ ಶಾಲಾ ಶಿಕ್ಷಕರೆಂದರೆ ಮೂಗು ಮುರಿಯುವವರೇ ಬಹಳ. 'ನಲಿಕಲಿ ಶಿಕ್ಷಕರು' ಎಂದು ಆಡಿಕೊಳ್ಳುವವರೂ ಇದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕವಿ/ಕಥೆಗಾರ/ಸಾಹಿತಿ ಎನ್ನಿಸಿಕೊಂಡವರ ಪರಂಪರೆಯೇ ನಮ್ಮಲ್ಲಿದೆ. ಕೆಲವರ ಹೆಸರನ್ನು ಉದಾಹರಿಸುತ್ತೇನೆ:
ಸಿಂಪಿ ಲಿಂಗಣ್ಣ
ಕುಂ ವೀರಭದ್ರಪ್ಪ
ಶಂ ಗು ಬಿರಾದಾರ
ನಿಂ ಗು ಸೊಲಗಿ
ಸ ರಘುನಾಥ
ಪಳಕಳ ಸೀತಾರಾಮ ಭಟ್ಟ
ವೀರಣ್ಣ ಮಡಿವಾಳರ

ಆರಿಫ್ ರಾಜಾ
ವಿಠ್ಠಲ ದಳವಾಯಿ
ಇಂದ್ರಕುಮಾರ್ ಎಚ್ ಬಿ
ನಿಮಗೆ ಗೊತ್ತಿದ್ದವರ ಹೆಸರನ್ನೂ ಸೇರಿಸುವಿರಾ?

Monday, December 17, 2012

ಛಪ್ಪನ್ನೈವತ್ತಾರು ದೇಶಗಳು

ಅಂಗ, ವಂಗ, ಕಳಿಂಗ, ತೆಲುಂಗ, ಕೊಂಗ, ಲಾಟ, ಬಂಗಾಳ, ಚೋಳ, ರಳ, ಗೌಳ, ಪಾಂಚಾಳ, ಸಿಂಹಳ, ಕುಂತಳ, ನೇಪಾಳ, ಮಲೆಯಾಳ, ತುಳುವ, ಸೈಂಧವ, ಕೊಂಕಣ, ಕುರು, ಮಗಧ, ಮತ್ಸ್ಯ, ವಿದರ್ಭ, ಕೋಸಲ, ಶೂರಸೇನ, ಕಾಶ್ಮೀರ, ಮಹಾರಾಷ್ಟ್ರ, ಕರ್ನಾಟ, ಕಿರಾತ, ತುರುಷ್ಕ, ಶಂಕರ, ಬರಮ, ತ್ರಿಗರ್ತ, ನಿಷಧ, ಮಧ್ಯ, ಜೈನ, ಬರ್ಬರ, ಬಾಹ್ಲಿಕ ರಾಳ, ಚೈನ, ಕರಾಟ, ಓಡ್ರ, ಗುರ್ಜರ, ಕಾಂಬೋಜ, ಸೌರಾಷ್ಟ್ರ, ಸೌವೀರ, ಪಾಂಡ್ಯ, ಹೂಣ, ಯವನ, ಮ್ಲೇಚ್ಛ, ಹೈಹಯ, ಆರ್ಯಾವರ್ತ, ಭೋಜ, ದ್ವೈಪ, ಆಮರಕ, ಉತ್ತರ ಕುರು, ಮತ್ತು ಗ್ರೈಟಿ.

Sunday, December 16, 2012

ಸವಿಯಾಗು ಛವಿಯಾಗು ಕವಿಯಾಗು

ಪ್ರಾಥಮಿಕ ಶಾಲೆಯಲ್ಲಿ ಓದಿದ ಒಂದು ಸುಂದರ ಪದ್ಯ:

ಹಣ್ಣಿನಲಿ ಬೆಣ್ಣೆಯಲಿ ಕೆನೆ ಮೊಸರು ಹಾಲಿನಲಿ
ಕಂದದಲಿ ಜೇನಿನಲಿ ರಸಗಬ್ಬು ಬಾಳೆಯಲಿ
ಎಳನೀರು ಹೊಳೆನೀರು ಹಾಲ್ದೆನೆಯ ಕಾಳಿನಲಿ
ಸಾರುತಿದೆ ಸೃಷ್ಟಿಯಿದು ಸವಿಯಾಗು ಎಂದು
ಸವಿಯಾಗು ಸವಿಯಾಗು ಸವಿಯಾಗು ಎಂದು!

ತಾರೆಯಲಿ ಚಂದ್ರನಲಿ ಸೂರ್ಯನಲಿ ರನ್ನದಲಿ
ಕಂಚಿನಲಿ ಮಿಂಚಿನಲಿ ಮುತ್ತಿನಲಿ ಚಿನ್ನದಲಿ
ಜ್ಯೋತಿಯಲಿ ನಯನದಲಿ ಉಷೆಯ ಹೊಂಬಣ್ಣದಲಿ
ಸಾರುತಿದೆ ಸೃಷ್ಟಿಯಿದು ಛವಿಯಾಗು ಎಂದು
ಛವಿಯಾಗು ಛವಿಯಾಗು ಛವಿಯಾಗು ಎಂದು!

ಶಬ್ದದಲಿ ಸವಿಯಾಗಿ ಅರ್ಥದಲಿ ಬೆಳಕಾಗಿ
ಬಾಳ ಭವ್ಯತೆಗಿಲ್ಲಿ ಬೆಳಕು ಸವಿ ಸಾಕಾಗಿ
ಬಾಳುವೆಯ ಸವಿಬೆಳಕ ಬರೆಯುವವ ಬೇಕಾಗಿ
ಸಾರುತಿದೆ ಸೃಷ್ಟಿ ಸವಿಛವಿಯಾಗಿ ನಿಂದು
ಕವಿಯಾಗು ಕವಿಯಾಗು ಕವಿಯಾಗು ಎಂದು!
- ’ಕಾವ್ಯಾನಂದ’ (ಸಿದ್ಧಯ್ಯ ಪುರಾಣಿಕ)

ಗೋ ಹತ್ಯೆ ನಿಷೇಧ

'ಗೋ ಹತ್ಯೆ' ಎಂಬ ಪದಪ್ರಯೋಗವೇ ಅದು ಧಾರ್ಮಿಕ ಬಣ್ಣವನ್ನು ಪಡೆದುಕೊಂಡಿರುವುದನ್ನು ಹೇಳುತ್ತದೆ. ವಯಸ್ಸಾದ ಹಾಗೂ ನಿರುಪಯುಕ್ತವಾದ ಹಸುಗಳನ್ನು ರೈತರು ಮಾರುತ್ತಾರೆ. ಇನ್ನಾರೋ ಅದನ್ನು ಕಡಿದು ತಿನ್ನುತ್ತಾರೆ. ಹಸುಗಳನ್ನು ಕೊಲ್ಲುವುದನ್ನು ತಡೆದರೆ ಬೀಡಾಡಿ ದನಗಳು ಹೆಚ್ಚಾಗುತ್ತವೆ. ಇಲ್ಲದ ಸಮಸ್ಯೆಯನ್ನು ಸೃಷ್ಟಿಸಿದಂತಾಗುತ್ತದೆ.